ತಾಯಿ ಭಾರತಿ
ತಾಯಿ ಭಾರತಿ ನಿನ್ನ ಚರಣಗಳಿಗೆ ಅರ್ಪಣ
ತಾಯಿ ಭಾರತಿ ನಿನ್ನ ಚರಣಗಳಿಗೆ ಅರ್ಪಣ
ನನ್ನಯ ತನು-ಮನ-ಧನ, ಈ ಜೀವನ ಸುಮನ
ಜನ್ಮವಿತ್ತು ವಾತ್ಸಲ್ಯದ ಸುಧೆ ಉಣಿಸಿದ ತಾಯಿ
ಸ್ವಾಭಿಮಾನ,ಸಂರಕ್ಷಣೆಯಿತ್ತು ಪೊರೆದ ತಂದೆ
ಸಂಸ್ಕಾರದಿಂದಂತಿಮ ಸತ್ಯದರಿವನಿತ್ತ ಗುರು
ನೀನೆ ಎಲ್ಲ ನಮಗೆ ನಾಡ ಒಡತಿ ಭಾರತಿ
ಬೃಹದ್ಧಿಮಾಲಯವೇ ಛತ್ರ, ತಂಗಾಳಿಯೇ ಚಾಮರ
ನೂರು ನದಿಗಳಾಭಿಷೇಕ ಪಾದ ತೊಳೆವ ಸಾಗರ
ನಿತ್ಯಹಸಿರುವನದ ಸೀರೆ, ವಿಂಧ್ಯಾದಿಗಳಾಭರಣ
ವರ್ಣಿಸಲಸದಳ ನಿನ್ನ ಭವ್ಯ ರೂಪ ದರ್ಶನ
ನಳನಳಿಸಲಿ ನಿನ್ನ ಮೊಗದಿ ಸದಾ ಮಂದಹಾಸ
ಪಸರಿಸಲಿ ವಿಶ್ವದಲಿ ನಿನ್ನ ಕೀರ್ತಿಭಾಸ
ನಿನ್ನ ವೈಭವೊಲ್ಲಾಸ ಸ್ಥಿರವಿರಲಿ ನಿರಂತರ
ಬಂದ ಬಾಧೆಯ ತೊಡೆವೆವು ಅರ್ಪಿಸೆಮ್ಮ ರುಧಿರ
ದೇಹದ ನರನಾಡಿಗಳಲಿ ನಿನ್ನ ಶಕ್ತಿ ಸಂಚಲನ
ರಕ್ತದ ಕಣಕಣಗಳಲೂ ನಿನ್ನದೇ ಗುಣಗಾನ
ಕ್ಷಣಕ್ಷಣಕೂ ಮಾಡುತಿಹುದು ಮನವು ನಿನ್ನ ಧ್ಯಾನ
ಹರಸಿ ರಕ್ಷಿಸೆಮ್ಮನು, ನಿನಗೆ ಕೋಟಿ ನಮನ ..
ತಾಯಿ ಭಾರತಿಗೊಂದು ಲಯಬದ್ಧ ದೇಶಭಕ್ತಿಯ ಪದಸಂಚಯ. ಸಮರ್ಪಣೆ.
ReplyDeleteತುಂಬಾ ಚೆಂದದ ಕವನ ಭೀಮಣ್ಣ.. ಮಹಾಭಾರತೀಯ ಮತ್ತೆ ಮಾತನಾಡಿದ್ದಾನೆ.. ನಿಮ್ಮ ಪ್ರಾಸದ ಲಾಸ್ಯ ಮತ್ತು ಪದ ಪ್ರಯೋಗ ನನ್ನನ್ನು ತುಂಬಾ ಮೋಡಿ ಮಾಡುತ್ತದೆ.. ತಾಯಿ ಭಾರತಿಯನ್ನು ಎಲ್ಲಾ ಓದುಗರ ನರ ನಾಡಿಯಲ್ಲೂ ಪ್ರವಹಿಸುವಂತೆ ಮಾಡಿದ್ದೀರಿ.. ತಾಯಿ ಭಾರತಿಗರ್ಪಿಸಿದ ನುಡಿ ನಮನ ಬಲು ಸೊಗಸಾಗಿದೆ.. ಓದಿ ತುಂಬಾ ಸಂತೋಷವಾಯ್ತು..:)))
ReplyDelete